Posts

Showing posts from August, 2026

ಸ್ನೇಹಕೊಂದು ಸವಾಲ್!

Image
  ಇಂದು ಸ್ನೇಹಿತರ ದಿನಾಚರಣೆ! ಪ್ರೀತಿಗೆ, ಸ್ನೇಹಕ್ಕೆ, ಅಪ್ಪ ಅಮ್ಮನ ವಾತ್ಸಲ್ಯಕ್ಕೆ ಒಂದು ದಿನವನ್ನು ನಿಗದಿಪಡಿಸುವುದು ಸೋಜಿಗವೇ ಸರಿ. ಅಂತಾರಾಷ್ಟ್ರೀಯವಾಗಿ ಈ ದಿನಗಳನ್ನೂ ಮಾರುಕಟ್ಟೆಯ ತಂತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ತಮ್ಮ ಪ್ರೇಯಸಿಗೆ, ಬಾಳ ಸಂಗಾತಿಗೆ ಏನನ್ನೂ ನೀಡದೇ ಪ್ರಪೋಸ್ ಮಾಡುವುದು ಎಷ್ಟು ಸರಿ? ತಮ್ಮ ತಂದೆ ತಾಯಂದಿರ ದಿನವನ್ನು ಉಡುಗೊರೆ ನೀಡದೆ ಆಚರಿಸುವುದು ತಪ್ಪಲ್ಲವೇ? ಹಾಗಾಗಿ ಇಂತಹ ದಿನಗಳಿಗೂ ಒಂದು ಮಾರುಕಟ್ಟೆ ಇದೆ. ಸ್ನೇಹಿತರಿಂದ ಮೇಲೆ ಸ್ನೇಹಿತರ ಬ್ಯಾಂಡ್ ಕಟ್ಟಿ ಆಚರಿಸೋಣ. ಅಥವಾ ಕನಿಷ್ಠ ವಾಟ್ಸಾಪ್ ನಲ್ಲಿ ಶುಭಾಶಯವನ್ನಾದರೂ ಹೇಳಿ ಕೈತೊಳೆದುಕೊಳ್ಳೋಣ ಅನ್ನುವ ಕಾಲ ನಮ್ಮದು. ನನ್ನ ಹಲವು ಸ್ನೇಹಿತರುಗಳಲ್ಲಿ ಕೆಲವರ ಜೊತೆ ನಿಷ್ಠುರ ಮಾಡಿಕೊಂಡು ದೂರವಾದರೂ, ಯಾರ ಜೊತೆಯೂ ದ್ವೇಷವನ್ನು ಕಟ್ಟಿಕೊಂಡಿಲ್ಲ. ನಾನು ಅಪೇಕ್ಷಿಸುತ್ತಿರುವ ಸ್ನೇಹಿತನ ಜವಾಬ್ದಾರಿಯನ್ನು ಆ ವ್ಯಕ್ತಿ ಪಾಲಿಸುತ್ತಿಲ್ಲವೆಂದಾದರೆ, ನನಗರಿವಿಲ್ಲದಂತೆ ಬಿರುಕು ಉಂಟಾಗುತ್ತದೆ. ಕೊನೆಗೆ ನಮ್ಮ ನಡುವೆ ಮನಸ್ತಾಪ ಉಂಟಾಗುವಂತೆ ನಾನೇನು ಮಾಡಿದ್ದೇನೆ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ನನ್ನ ವಿದ್ಯಾರ್ಥಿ ಜೀವನದಲ್ಲಿ ನಾನು ಬೇರೆ ಬೇರೆ ಊರುಗಳ ಶಾಲಾ ಕಾಲೇಜುಗಳಿಗೆ ಹೋಗಿರುವುದರಿಂದ ಸದಾ ಸಂಪರ್ಕದಲ್ಲಿರುವ ಶಾಶ್ವತ ಸ್ನೇಹಿತರು ನನಗಿಲ್ಲ. ನನ್ನ Friends Forever ವಾಟ್ಸಾಪ್ ಗ್ರೂಪುಗಳಲ್ಲಿ, ಫೋನ್ ನಂಬರುಗಳಲ್ಲಿ ಮಾತ್ರ ...