Posts

Showing posts from May, 2026

ಪೂರ್ವಜನ್ಮ ಪ್ರತ್ಯಾವರ್ತನ ಚಿಕಿತ್ಸಾ ತರಬೇತಿ ಶಿಬಿರ. ಒಂದು ಅವಿಸ್ಮರಣೀಯ ಸತ್ಸಂಗ

Image
  ಅಂತಾರಾಷ್ಟ್ರೀಯ ಖ್ಯಾತಿಯ ಡಾ ಶ್ರೀ ರಾಮಚಂದ್ರ ಗುರೂಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಹತ್ತು ದಿನಗಳ ಕಾಲ ನಡೆದ "ಪೂರ್ವಜನ್ಮ ಪ್ರತ್ಯವರ್ತನ ಚಿಕಿತ್ಸಾ" ಶಿಬಿರ ಎಂದೆಂದಿಗೂ ಮಾಸದ ಒಂದು ಅವಿಸ್ಮರಣೀಯ ಅನುಭವ. ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದು ಅವರೆಲ್ಲರೂ ಸ್ವಯಂಚಿಕಿತ್ಸಕರಾಗಿ ಅಷ್ಟೇ ಅಲ್ಲದೆ ಗುರುಗಳ ಕಾರುಣ್ಯದಿಂದ ಇತರರಿಗೂ ಚಿಕಿತ್ಸೆ ಮಾಡುವ ಚಿಕಿತ್ಸಕ ಕೈಗಳನ್ನು ಪಡೆದಿರುತ್ತಾರೆ. ಏನಿದು ಪೂರ್ವಜನ್ಮ ಪ್ರತ್ಯಾವರ್ತನ ? ವ್ಯಕ್ತಿಯೊಬ್ಬ ವ್ಯಕ್ತಿಯೂ ತಾನು ಅನುಭವಿಸುವ ಕಷ್ಟ ಅಥವಾ ಸುಖಗಳ ಮೂಲ ಭೂತಕಾಲದಲ್ಲಡಗಿದೆ. ಉದಾಹರಣೆಗೆ ನಾವು ಇಂದು ತಿನ್ನುವ ಆಹಾರ ಭವಿಷ್ಯದಲ್ಲಿ ನಮ್ಮ ದೇಹದ ಮೇಲೆ ಪರಿಣಾಮ ಬೀಳುತ್ತದೆ. ನಮ್ಮ ಆಹಾರ ಉತ್ತಮವಾಗಿದ್ದರೆ ಆರೋಗ್ಯವಂತರಾಗುತ್ತೇವೆ. ಒಂದು ವೇಳೆ ಗುಣಮಟ್ಟರಹಿತ ಆಹಾರವಾಗಿದ್ದರೆ ಅನಾರೋಗ್ಯಕ್ಕೊಳಪಡುತ್ತೇವೆ. ಇದು ಕೇವಲ ಆಹಾರದ ವಿಷಯದಲ್ಲಿ ಅಲ್ಲದೆ ನಮ್ಮ ಆಲೋಚನೆ, ನಮ್ಮ ನಡತೆಗಳೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ನಾವು ಕರ್ಮ ಫಲ ಎನ್ನುತ್ತೇನೆ. ನಾವು ತಿನ್ನುವ ಆಹಾರ ಈ ಜನ್ಮದಲ್ಲೇ ಪರಿಣಾಮವನ್ನು ನೀಡಿದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಮುಂದಿನ ಜನ್ಮದಲ್ಲೂ ಪರಿಣಾಮವನ್ನು ನೀಡುತ್ತದೆ.  ಒಂದಷ್ಟು ಸರಳ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ನೀವು ಹಿಂದಿನ ಜನ್ಮದಲ್ಲಿ ಮಾಡಿದ ಪ್ರಯತ್ನ...