Posts

Showing posts from 2022

ಜೀವನದ ಏಕತಾನತೆಯಿಂದ ಹೊರಬರುವುದು ಹೇಗೆ?

Image
ಚಿಕ್ಕವರಿರುವಾಗ ಬೆಟ್ಟವನ್ನೇ ಕಡಿಯುತ್ತೇನೆ ಎನ್ನುವ ಉತ್ಸಾಹ, ಚೈತನ್ಯ ಒಂದು ವಯಸ್ಸಿಗೆ ಬಂದ ಮೇಲೆ ವಾಸ್ತವದ ಅರಿವಾಗಿ ಜೀವನದ ಜಂಜಾಟವನ್ನು ಎದುರಿಸುವುದರಲ್ಲೇ ಕಳೆಯಲಾರಂಭಿಸುತ್ತೇವೆ. ನಮ್ಮ ಯೋಗ್ಯತೆ, ನಿರೀಕ್ಷೆಗನುಗುಣವಾಗಿ ಉದ್ಯೋಗ ಪಡೆದು ಅದರಲ್ಲೇ ತೃಪ್ತಿ ಹೊಂದಿ,ತಿಂಗಳ ಕೊನೆಯವರೆಗೆ ಮನೆಯ ಖರ್ಚು ವೆಚ್ಚಕ್ಕೆ, ಸ್ವಲ್ಪ ಧೈರ್ಯ ಮಾಡಿ ಸಾಲ ಮಾಡಿದರೆ, ಅದರ ಇಎಂಐ ಗೆ ಸರಿ ಹೊಂದುವಷ್ಟು ಆದಾಯ ಬಂದರೆ ಅಷ್ಟು ಸಾಕು ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಸ್ಥಾವರವಾಗುತ್ತದೆ. ಆರಕ್ಕೇರದಿದ್ದರೂ ಮೂರಕ್ಕಿಳಿಯದಿದ್ದರೆ ಸಾಕು ಅನ್ನುವ ಎಚ್ಚರಿಕೆಯಿಂದಲೇ ನೂರಕ್ಕೆ ಎಂಭತ್ತರಷ್ಟು ಜನ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕದೆ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇವೆ. ಅಥವಾ ಹಾಗೆಂದುಕೊಳ್ಳುತ್ತೇವೆ. ಒಂದು ನಿರ್ದಿಷ್ಟ ಗುರಿಯಿಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡಿ, ಕೊನೆಗೆ ಹಿಂದಿರುಗಿ ನೋಡಿದಾಗಲೇ ಗೊತ್ತಾಗುವುದು, ಜೀವನ ಎಷ್ಟೊಂದು ರೊಟೀನ್ ಆಗಿದೆಯಲ್ಲ ಎಂದು. ಈ ಏಕತಾನತೆಯ ಜೀವನ ಅದೆಷ್ಟೋ ಜನರಿಗೆ ಅಭ್ಯಾಸವಾಗಿ ಅದರಿಂದ ಹೊರಬರಲೂ ಕೂಡ ಅವರ ಕಂಫರ್ಟ್ ಜೋನ್ ಬಿಡುವುದಿಲ್ಲ. ಜೀವನ ಇಷ್ಟೇ ಅನ್ನುವ ಅಭಿಪ್ರಾಯಕ್ಕೆ ಬಂದುಬಿಟ್ಟು ಬದುಕಿದ್ದಷ್ಟು ದಿನ ದಿನ ದೂಡುವುದೇ ಜೀವನ ಅನ್ನುವ ಮನಸ್ಥಿತಿ ಹಲವರಾಗಿರುತ್ತದೆ. ನಿಮ್ಮದೂ ಅಂಥಹ ಮನಸ್ಥಿತಿ ಆಗಿರದೇ, ಜೀವನದಲ್ಲಿ ಏಕತಾನತೆಯನ್ನು ಅನುಭವಿಸಿ ಅದರಿಂದ ಹೊರಬರಲು ಏನು ಮಾಡಬೇಕು ಎಂದು ತಿಳಿಯಬ...