Posts

Showing posts from October, 2021

The Go-Giver ಪುಸ್ತಕ ತಾತ್ಪರ್ಯ

Image
ಪ್ರತಿಯೊಬ್ಬರೂ ಯಶಸ್ಸನ್ನು ಬಯಸುತ್ತಾರೆ. ಯಶಸ್ವಿಯಾಗಬೇಕಾದರೆ ತಾವು ಬಯಸಿದ್ದನ್ನು ಪಡೆಯುವುದರಲ್ಲಿ ತಲ್ಲೀನನಾನಗಬೇಕು ಎನ್ನುವುದು ಸಾಮಾನ್ಯ ತಿಳುವಳಿಕೆ. ತಮ್ಮ ಯಶಸ್ಸಿಗಾಗಿ ಹೇಗಾದರೂ ಸರಿ ಬಯಸ್ಸಿದ್ದೆಲ್ಲವನ್ನೂ ಪಡೆಯಲೇಬೇಕು ಎನ್ನುವ ಧಾವಂತದಲ್ಲಿರುವವರಿಗೆ The Go-Getter ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಆದರೆ ಯಶಸ್ವೀ ವ್ಯಕ್ತಿ ಆಗಬೇಕಾದರೆ ಕೇವಲ ಇತರರಿಂದ ಬಯಸುವುದಲ್ಲ. ಅದರ ಬದಲಾಗಿ ಇತರರಿಗಾಗಿ ನಾವು ನಮ್ಮಿಂದಾದ ಕೊಡುಗೆಯನ್ನು ನೀಡುವುದು ಎಂದು The Go-Giver ಪುಸ್ತಕ ಸಾಬೀತುಪಡಿಸುತ್ತದೆ. ಹಾಗಾದರೆ ಕೊಡುವುದರಿಂದ ಹೇಗೆ ನಮಗೆ ಬೇಕಾದುದನ್ನು ಪಡೆಯಬಹುದು ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ. The Go-Giver ಪುಸ್ತಕದ ಕರ್ತೃಗಳಾದ ಬಾಬ್ ಬರ್ಗ್ ಹಾಗೂ ಜಾನ್ ಡೇವಿಡ್ ಮನ್ ನೀತಿ ಕಥೆಯ ರೂಪದಲ್ಲಿ ಗೆಲುವಿನ ರಹಸ್ಯವನ್ನು ಹೇಳುತ್ತಾರೆ. ಈ ಕಥೆ go-getter ಮನೋಭಾವವನ್ನು ಹೊಂದಿದ್ದ ಜೋ ಎನ್ನುವ ಪಾತ್ರದ ಸುತ್ತ ಹಣೆದಿದೆ. ತನ್ನ ವೃತ್ತಿಯಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದುವುದರ ಮೂಲಕ ಸಾಕಷ್ಟು ಸಂಪತ್ತನ್ನು ಗಳಿಸುವ ಗುರಿಯನ್ನು ಹೊಂದಿದ್ದ ಜೋಗೆ ತನ್ನ ಒಬ್ಬ ಕ್ಲೈಂಟ್ ತಪ್ಪಿ ಹೋಗಿದ್ದಕ್ಕೆ ಬಹಳ ನಿರಾಸೆ ಆಗುತ್ತದೆ. ಆಗ ಯಶಸ್ಸಿನ ಪಾಠವನ್ನು ಹೇಳಿಕೊಡುವ ಯಶ್ಸಸ್ವಿ ಉದ್ಯಮಿ ಪಿಂದರ್ ನನ್ನು ತನ್ನ ಹಿರಿಯ ಸಹುದ್ಯೋಗಿಯ ಮುಖಾಂತರ ಭೇಟಿ ಆಗುತ್ತಾನೆ. ಈಗಾಗಲೇ ಸಾಕಷ್ಟು ಹಣವನ್ನು ಸಂಪಾದಿಸಿದ ಪಿಂದರ್ ನನ್ನು ಭೇಟಿ ಆಗುವುದು ...