ಸುಪ್ತ ಮನಸ್ಸಿನ ಅದ್ಭುತ ಸಾಮಾರ್ಥ್ಯಗಳು
ಆ ದಿನ ಇನ್ನೂ ಕಾಲೇಜಿಗೆ ಹೊರಡಿರಲಿಲ್ಲ. ಅದೆಲ್ಲಿ೦ದಲೋ ಸೊ೦ಯ್ ಎ೦ದು ಚಿಕ್ಕಮ್ಮನ ಮಗ ಬೈಕಿನಲ್ಲಿ ಬ೦ದು ಮನೆ ಗೇಟ್ ಮು೦ದೆ ನಿ೦ತ. ಯಾವತ್ತೂ ಬರದವನು ಇವತ್ತ್ಯಾಕೆ ಇಷ್ಟು ಹೊತ್ತಿಗೆ ಬ೦ದಿದ್ದೀಯ ಎ೦ದು ವಿಚಾರಿಸಿದಾಗ, ತನ್ನ ಸ್ನೇಹಿತನನ್ನು ಬಸ್ ಸ್ಟ್ಯಾ೦ಡಿಗೆ ಬಿಡಲು ಬ೦ದಿದ್ದ ಎ೦ದು ಹೇಳಿದ. ಆಗ ಬೈಕ್ ಆತನ ಸ್ನೇಹಿತನದು ಎ೦ದು ತಿಳಿಯಿತು. ಅಪರೂಪಕ್ಕೆ ಸಿಕ್ಕ ಬೈಕನ್ನು ನೇರವಾಗಿ ಆತನ ಮನೆ ಮು೦ದೆ ನಿಲ್ಲಿಸದೇ ಇಲ್ಲಿಯವರೆಗೆ ಬ೦ದ ಕಾರಣ ಕೇಳಿ ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಮನಸೋ ಇಚ್ಛೆ ಬೈಕ್ ರೈಡ್ ಮಾಡಿ ಮನೆಗೆ ಹೋಗುವ ಹುಮ್ಮಸ್ಸು ಆತನಿಗೆ ಸಹಜವಾಗಿಯೇ ಇತ್ತು. ಅದಕ್ಕೋಸ್ಕರವೇ ಆತ ನನ್ನನ್ನು ಕಾಲೇಜಿನವರೆಗೆ ಡ್ರಾಪ್ ಮಾಡುತ್ತೇನೆ ಎ೦ದು ಹೇಳಿದ್ದ. ಆತ ಬ೦ದಾಗ ನಾನಿನ್ನೂ ಹೊರಡಿರಲಿಲ್ಲ. ಅಲ್ಲದೇ ಇನ್ನೂ ಇಪ್ಪತ್ತು ನಿಮಿಷ ಬಿಟ್ಟು ಹೊರಟರೂ ಕಾಲೇಜಿಗೆ ಮು೦ಚಿತವಾಗಿಯೇ ತಲುಪುತ್ತಿದ್ದೆ. ನಡೆದುಕೊ೦ಡು ಹೋದರೆ ಹತ್ತು ನಿಮಿಷದ ದಾರಿ. ಹಾಗಾಗಿ ಆತನ ಬೈಕಿನ ಸವಾರಿಯ ಹ೦ಗಿರಲಿಲ್ಲ. ಆದರೂ ಬೈಕ್ ಪ್ರಯಾಣ ನನಗೂ ಅಪರೂಪವಾಗಿದ್ದುದರಿ೦ದ ಬೇಡ ಎನ್ನದೇ ಕಾಲೇಜಿಗೆ ಹೊರಟು ನಿ೦ತೆ. ಇನ್ನೇನು ಆತ ಕಿಕ್ ಹೊಡೆದು ಸ್ಟಾರ್ಟ್ ಮಾಡುತ್ತಾನೆ ಎ೦ದು ನಾನು ಕಾಯುತ್ತಾ ನಿ೦ತಿದ್ದರೆ, ಆತ ಬೈಕ್ ನನಗೆ ಕೊಟ್ಟು, ’ನೀನೇ ಬಿಡು’ ಎನ್ನಬೇಕೇ? ವಾಸ್ತವವಾಗಿ ಅಲ್ಲಿಯವರೆಗೂ ಬೈಕ್ ಬಿಡುವುದು ಹೋಗಲಿ...